ಕಾಸ್ಟಿಲ್ಯೋನಾ, ಬಾಲ್ಡಾಸಾರೆ ಕಾಂಟೆ

 1478-1529. ಇಟಲಿಯ ರಾಜಕಾರಣಿ, ಸಾಹಿತಿ, ಆಸ್ಥಾನಿಕ. ಹುಟ್ಟಿದ್ದು ಕಸಾಟಿಕದಲ್ಲಿ. ವಿದ್ಯಾಭ್ಯಾಸ ಮಿಲಾನಿನಲ್ಲಿ. ಇಲ್ ಲಿಬ್ರೊ ಡೆಲ್ ಕೊರ್ಟೆಜಿಯಾನೊ (ಆಸ್ಥಾನಿಕನ ಕೈಪಿಡಿ) ಎಂಬ ಗದ್ಯಗ್ರಂಥ ಹೊಸ ಹುಟ್ಟಿನ ಕಾಲದ ಐರೋಪ್ಯ ಸಾಹಿತ್ಯದಲ್ಲಿ ಶ್ರೇಷ್ಠ ಕೃತಿ ಎನಿಸಿದೆ. ಇದರಲ್ಲಿ ಆದರ್ಶ ಆಸ್ಥಾನಿಕನ, ಸದ್ಗøಹಸ್ಥನ ಗುಣಲಕ್ಷಣಗಳನ್ನಲ್ಲದೆ ಆಗಿನ ಸಾಮಾಜಿಕ, ರಾಜಕೀಯ, ಧಾರ್ಮಿಕ ತತ್ತ್ವಗಳ ವಿಶ್ಲೇಷಣೆಯನ್ನು ಕಾಣಬಹುದು. ಇದಲ್ಲದೆ ಈತ ಇಟಾಲಿಯನ್ ಮತ್ತು ಲ್ಯಾಟಿನ್ ಭಾಷೆಗಳೆರಡಲ್ಲೂ ಕವನಗಳನ್ನು ಬರೆದಿದ್ದಾನೆ.           

(ಎಚ್.ಕೆ.ಆರ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ